ರಾಮ ಮಂದಿರ ಬ್ಲಾಸ್ಟ್‌ಗೆ ಪಾಕ್ ಜೊತೆ ಸ್ಕೆಚ್: ಹರಿಹರದಲ್ಲಿ ಪೇಂಟರ್ ಸೋಗಿನಲ್ಲಿದ್ದ ಉಗ್ರ ಸುಹೇಲ್ ಲಾಕ್!
ದಾವಣಗೆರೆಯ ಹರಿಹರದಲ್ಲಿ ಸಿಕ್ಕಿಬಿದ್ದ ಶಂಕಿತ ಉಗ್ರ ಸುಹೇಲ್ ಇಡೀ ದೇಶದ ಭದ್ರತಾ ಪಡೆಗಳ ನಿದ್ದೆಗೆಡಿಸಿದ್ದಾನೆ. ಈತನ ಮೊಬೈಲ್ ಅನ್‌ಲಾಕ್ ಮಾಡ್ತಿದ್ದಂತೆ…
ದಾವಣಗೆರೆಯ ಹರಿಹರದಲ್ಲಿ ಸಿಕ್ಕಿಬಿದ್ದ ಶಂಕಿತ ಉಗ್ರ ಸುಹೇಲ್ ಇಡೀ ದೇಶದ ಭದ್ರತಾ ಪಡೆಗಳ ನಿದ್ದೆಗೆಡಿಸಿದ್ದಾನೆ. ಈತನ ಮೊಬೈಲ್ ಅನ್‌ಲಾಕ್ ಮಾಡ್ತಿದ್ದಂತೆ ಪೊಲೀಸರೇ ಬೆಚ್ಚಿಬಿದ್ದಿದ್ದು, ಅಯೋಧ್ಯೆಯ ಭವ್ಯ ರಾಮ ಮಂದಿರವನ್ನು ಬಾಂಬ್ ಇಟ್ಟು ಉಡಾಯಿಸಲು ಸ್ಕೆಚ್ ಹಾಕಿದ್ದ ಭಯಾನಕ ಸತ್ಯ ಎಫ್‌ಐಆರ್‌ನಲ್ಲಿ ರಿವೀಲ್ ಆಗಿದೆ. ಪಾಕಿಸ್ತಾನದ ಹ್ಯಾಂಡ್ಲರ್‌ಗಳ ಜೊತೆ ನಿರಂತರ ಟಚ್‌ನಲ್ಲಿದ್ದ ಸುಹೇಲ್, ತನ್ನ ವಾಟ್ಸಾಪ್‌ನ ‘ಲಾಕ್‌ಡ್ ಚಾಟ್’ನಲ್ಲಿ ಪಾಕ್ ಮೂಲದ ನಂಬರ್ ಒಂದನ್ನು ‘ರಾಣಾ ಜೀ’ ಅಂತ ಸೇವ್ ಮಾಡಿಕೊಂಡಿದ್ದ. ಇವರಿಬ್ಬರ ನಡುವೆ ನಡೆದಿರೋ ಉರ್ದು ಮಿಶ್ರಿತ…
ಸರ್ಕಾರಿ ಆದೇಶದ ಹೆಸರಲ್ಲಿ ಗ್ರೇಡ್-1 ಕಾರ್ಯದರ್ಶಿಗಳ ಜೇಷ್ಠತಾ ಪಟ್ಟಿ ಮತ್ತು ಮುಂಬಡ್ತಿ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರದ ದಂಧೆ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ದಿನಾಂಕ 15-07-2023ರ ಸರ್ಕಾರಿ ಆದೇಶದ ಅನ್ವಯ 2024ರಿಂದಲೇ ಈ ಜೇಷ್ಠತಾ ಪಟ್ಟಿ ಸಿದ್ಧಪಡಿಸುವ ಕಾರ್ಯ ಆರಂಭವಾಗಿದ್ದರೂ, ಕಳೆದ ಎರಡು ವರ್ಷಗಳಲ್ಲಿ ಸಭೆ ಮತ್ತು ನಿರ್ದೇಶನಗಳ ಹೆಸರಿನಲ್ಲಿ ಬರೊಬ್ಬರಿ 50ರಿಂದ 70ಕ್ಕೂ ಹೆಚ್ಚು ಬಾರಿ ಸಭೆಗಳನ್ನು ನಡೆಸಲಾಗಿದೆ. ಆದರೆ, ಪ್ರತಿ ಬಾರಿಯೂ ಯಾವುದೇ ಸೂಕ್ತ ಕಾರಣವಿಲ್ಲದೆ ಪ್ರಕ್ರಿಯೆಯನ್ನು ಮುಂದೂಡುತ್ತಾ ಕಾಲಹರಣ ಮಾಡಲಾಗಿದೆ ಎಂಬ…
ಬೆಂಗಳೂರಿನಲ್ಲಿ ಕಾನೂನು ರಕ್ಷಕನೇ ಭಕ್ಷಕನಾದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸಿಐಡಿ ವಿಭಾಗದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಎಂಬಾತನೇ ಗ್ಯಾಂಗ್ ಕಟ್ಟಿಕೊಂಡು ಕೇರಳ ಮೂಲದ ಉದ್ಯಮಿಗಳನ್ನು ಹೆದರಿಸಿ 20 ಲಕ್ಷ ರೂಪಾಯಿ ಲೂಟಿ ಮಾಡಿದ್ದಾನೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ದರೋಡೆಗೆ ಇಲಾಖೆಯ ಅಧಿಕೃತ ಸಿಐಡಿ ಜೀಪನ್ನೇ ಬಳಸಿರುವುದು ಸದ್ಯ ತೀವ್ರ ಸಂಚಲನ ಮೂಡಿಸಿದೆ. ದರೋಡೆ ನಡೆದಿದ್ದು ಹೇಗೆ? ವ್ಯಾಪಾರ ಮತ್ತು ಟ್ರೇಡಿಂಗ್ ಉದ್ದೇಶಗಳಿಗಾಗಿ ಕೇರಳದ ಉದ್ಯಮಿಗಳು ದೊಡ್ಡ ಮೊತ್ತದ ನಗದಿನೊಂದಿಗೆ ಬೆಂಗಳೂರಿಗೆ ಬಂದು,…
ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ರೌಡಿಗಳ ಹೆಡೆಮುರಿ ಕಟ್ಟಲು ಚಾಮರಾಜನಗರ ಜಿಲ್ಲೆಯ 4 ವೃತ್ತ ಹಾಗೂ 7 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ “ರೌಡಿ ನಿಗ್ರಹ ದಳ” ಅನ್ನು ರಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀ ಮುತ್ತುರಾಜು ಎಂ., ಐಪಿಎಸ್ ಅವರ ಆದೇಶದ ಮೇರೆಗೆ ಈ ಕಡಕ್ ಕ್ರಮ ಕೈಗೊಳ್ಳಲಾಗಿದ್ದು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರಾಜ್ಯಾದ್ಯಂತ…
ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾಗಿ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ಪರಿಷತ್ತಿನ ಒಟ್ಟು 23 ಸದಸ್ಯ ಸ್ಥಾನಗಳಿಗಾಗಿ ಮಾರ್ಚ್ 11 ರಂದು ಚುನಾವಣೆ ನಡೆದಿತ್ತು. ಮಾರ್ಚ್ 16 ರಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 17ರ ಬುಧವಾರ ಹೊರಬಿದ್ದ ಫಲಿತಾಂಶದ ಅನ್ವಯ ಪಿ.ಪಿ. ಹೆಗ್ಡೆ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ಈ ಗೆಲುವಿನ ಮೂಲಕ ಸತತ ನಾಲ್ಕನೇ ಬಾರಿಗೆ ಅವರು ವಕೀಲರ ಪರಿಷತ್ತನ್ನು ಪ್ರವೇಶಿಸಿದಂತಾಗಿದೆ. ಹಿರಿಯ…
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪದಬಳಕೆ, ಕೋಮು ಸೌಹಾರ್ದತೆಗೆ ಧಕ್ಕೆ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮುತ್ತುರಾಜು ಎಂ. ಅವರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ್ದ ಹಿನ್ನೆಲೆಯಲ್ಲಿ, ಕೊಳ್ಳೆಗಾಲ ಪೊಲೀಸರು ದೂರು ದಾಖಲಿಸಿಕೊಂಡು ಓರ್ವ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದರ…
ಶ್ರೀರಂಗಪಟ್ಟಣ: ತಾಲ್ಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಂಗಹಳ್ಳಿ ಗ್ರಾಮದಲ್ಲಿ ನಿಯಮಬಾಹಿರವಾಗಿ ಅಂಬೇಡ್ಕರ್ ಭವನವನ್ನು ನೆಲಸಮಗೊಳಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಶ್ರೀನಿವಾಸ್ ಕೆ. ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಅಮಾನತು ಆದೇಶ ಹೊರಬಿದ್ದರೂ ಅಧಿಕಾರಿ ಇಂದಿಗೂ ಕರ್ತವ್ಯದಲ್ಲಿ ಮುಂದುವರಿದಿರುವುದು ಸಾರ್ವಜನಿಕರಲ್ಲಿ ತೀವ್ರ ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ಹಿನ್ನೆಲೆ: ಹೊಂಗಹಳ್ಳಿ ಗ್ರಾಮದ ಅಂಬೇಡ್ಕರ್ ಭವನದ ದುರಸ್ತಿಗಾಗಿ 2025-26ನೇ ಸಾಲಿನ ಶೇ. 25ರ…
ವರದಿ : ನಾರ. ವೆಂಕಟೇಶ್ ಮೂರ್ತಿಮೊ. ಸಂ= 7411173919 ಹೊನ್ನಯ್ಯ ಎಂಬ ಹೆಸರಿನ ಈ ಸಾಹೇಬರು ಕಳೆದ ಎರಡು ವರ್ಷಗಳಿಂದ ಇಲ್ಲಿರುತ್ತಾರೆ. ಇವರ ಅಧಿಕಾರಾವಧಿಯಲ್ಲಿ ಬಹುತೇಕ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯವಸ್ಥೆ ಎಕ್ಕುಟ್ಟಿ ಹೋಗಿರುವುದು ಅಲ್ಲಲ್ಲೇ ಕಾಣಿಸುತ್ತದೆ. ಆದರೆ ಇವುಗಳ ಜವಾಬ್ದಾರಿ ಹೊತ್ತ ಇಯಪ್ಪ ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ. ಅದಕ್ಕಿಂತ ಮುಂಚೆ ಪ್ರಸ್ತುತ ಪಂಚಾಯಿತಿ ಪಿಡಿಒ ಒಬ್ಬರ ಅಕ್ರಮ ಕಾರ್ಯವೈಖರಿ ಹೇಗಿರುತ್ತದೆ ಎಂದು ಸ್ಯಾಂಪಲ್ ನೋಡೋಣ. ಇದು ತೊಂಡೆಬಾವಿ ಎಂಬ ಗ್ರಾಮ ಪಂಚಾಯಿತಿ ಕಥೆ. ಈ…
ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿಚಾಮರಾಜನಗರ: ಇ ಖಾತಾ ಮಾಡಿಕೊಡಲು ಸಾರ್ವಜನಿಕರಿಂದ ಬರೋಬ್ಬರಿ 25 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಚಾಮರಾಜನಗರ ನಗರಸಭೆಯ ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಮಧ್ಯವರ್ತಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಚಾಮರಾಜನಗರದ ನಗರಸಭೆ ಕಚೇರಿಯಲ್ಲಿಯೇ ಈ ಹೈಡ್ರಾಮಾ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ನಗರಸಭೆಯ ಕಂದಾಯ ಅಧಿಕಾರಿ (RO) ಹೇಮಂತ್ ಕುಮಾರ್, ಕಂದಾಯ ನಿರೀಕ್ಷಕ (RI) ಶಕೀಲ್ ಅಹಮ್ಮದ್ ಹಾಗೂ ಲಂಚದ ಹಣ ವಸೂಲಿಗೆ ನಿಂತಿದ್ದ ದಲ್ಲಾಳಿ ಹಬೀಬ್ ಸಿಕ್ಕಿಬಿದ್ದ ಆರೋಪಿಗಳು….
ಚಾಮರಾಜನಗರ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯ ಮಟ್ಟದ ಕುರುಬರ ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷರಾದ ಬಿ.ಎಸ್. ಶಶಿಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಎ.ಆರ್. ಕೃಷ್ಣಮೂರ್ತಿ ಅವರು ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹಿಂದುಳಿದ ಹಾಗೂ ದಲಿತ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರ ರಾಜಕೀಯ ಹಿರಿತನ ಮತ್ತು ಪಕ್ಷಕ್ಕೆ ನೀಡಿರುವ ಕೊಡುಗೆಯನ್ನು…